ಲೆಫ್ಟಿನೆಂಟ್ ಜನರಲ್ ಜೈ ಸಿಂಗ್ ನೈನ್ ಅವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ಸೇನಾ ಪದಕ ಪುರಸ್ಕೃತರು. ಇವರು ಭಾರತೀಯ ಸೇನೆಯ ದಕ್ಷಿಣ ಕಮಾಂಡ್‌ನ ಮಾಜಿ ಜನರಲ್ ಆಫೀಸರ್-ಕಮಾಂಡಿಂಗ್-ಇನ್-ಚೀಫ್ (ಜಿಒಸಿ-ಇನ್-ಸಿ) ಆಗಿದ್ದಾರೆ. ಅವರು ಲೆಫ್ಟಿನೆಂಟ್ ಜನರಲ್ ಚಂಡಿ ಪ್ರಸಾದ್ ಮೊಹಂತಿ ಅವರ ನಂತರ ಈ ಹುದ್ದೆಯನ್ನು ವಹಿಸಿಕೊಂಡರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಕುಂಜ್ಪುರದ ಸೈನಿಕ ಶಾಲೆಯಿಂದ ಪಡೆದಿದ್ದರು. == ವೃತ್ತಿ == ಜೂನ್ ೧೯೮೩ರಲ್ಲಿ ನೈನ್ ಅವರನ್ನು ಡೋಗ್ರಾ ರೆಜಿಮೆಂಟ್‌ನ ೨ ನೇ ಬೆಟಾಲಿಯನ್‌ಗೆ ನಿಯೋಜಿಸಲಾಯಿತು. ಅವರು ವೆಲ್ಲಿಂಗ್ಟನ್ ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್, ಸಿಕಂದರಾಬಾದ್‌ನ ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್ ಹಾಗೂ ನ್ಯಾಷನಲ್ ಡಿಫೆನ್ಸ್ ಕಾಲೇಜ್ (ಬಾಂಗ್ಲಾದೇಶ)ಗಳಲ್ಲಿ ಪದವಿಗಳನ್ನು ಪಡೆದಿದ್ದರು. ನೈನ್ ಇರಾಕ್ ಮತ್ತು ಕುವೈತ್‌ನಲ್ಲಿ ಯುಎನ್ ಮಿಷನ್‌ನೊಂದಿಗೆ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಇವರು ಹರ್ಯಾಣದ ಕರ್ನಾಲ್ ಕುಂಜ್‌ಪುರದ ಸೈನಿಕ್ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಖಡಕ್ವಾಸ್ಲಾ ಪುಣೆಯ ೬೨ನೇ ಕೋರ್ಸ್ ಹಂಟರ್ ಸ್ಕ್ವಾಡ್ರನ್‌ಗೆ ಸೇರಿದವರಾಗಿದ್ದರು. == ಪ್ರಶಸ್ತಿಗಳು == == ಶ್ರೇಣಿಯ ದಿನಾಂಕಗಳು == == ಉಲ್ಲೇಖಗಳು ==